ಸಂಸ್ಥೆ ಬಗ್ಗೆ

ಉತ್ತರ ಕರ್ನಾಟಕ ಭಾಗದ ಜನತೆಗೆ ದಕ್ಷ ಉತ್ತಮ, ಸುರಕ್ಷಿತ, ವಿಶ್ವಾಸಾರ್ಹ ಹಾಗೂ ಮಿತವ್ಯಯಸಾರಿಗೆ ಸೌಲಭ್ಯವನ್ನು ಒದಗಿಸುವ ಮೂಲ ಉದ್ದೇಶದಿಂದ ದಿ : 01-11-1997 ಕರ್ನಾಟಕ ರಾಜ್ಯೋತ್ಸವದಂದು ಮಾತೃ ಸಂಸ್ಥೆಯಾದ ಕರಾರಸಾಸಂಸ್ಥೆಯಿಂದ ವಿಭಜನೆಗೊಂಡು ರಸ್ತೆ ಸಾರಿಗೆ ಸಂಸ್ಥೆ ಕಾಯ್ದೆ 1950 ರಡಿಯಲ್ಲಿ ವಾಯವ್ಯ ಕರ್ನಾಟಕ ರಸ್ತೆ ಸಾರಿಗೆ ಸಂಸ್ಥೆಯು ಸ್ಥಾಪನೆಗೊಂಡಿತು. ಸಂಸ್ಥೆಯ ವ್ಯಾಪ್ತಿಯಲ್ಲಿ ಬೆಳಗಾವಿ, ಧಾರವಾಡ, ಉತ್ತರ ಕನ್ನಡ, ಬಾಗಲಕೋಟೆ, ಗದಗ & ಹಾವೇರಿ ಜಿಲ್ಲೆಗಳಿರುತ್ತವೆ.

ಸಂಸ್ಥೆಯ ವ್ಯ್ಯಾಪ್ತಿಯು ಸಂಪೂರ್ಣ ಕಂದಾಯ ಜಿಲ್ಲೆಗಳಿಂದ ಕೂಡಿದ್ದು, ಸಂಸ್ಥೆಯ ವ್ಯಾಪ್ತಿಯ ಎಲ್ಲಾ ಸಂಚಾರ ಯೋಗ್ಯ ರಸ್ತೆಗಳಿರುವ ಹಳ್ಳಿಗಳಿಗೆ ಸಾರಿಗೆ ಸೌಲಭ್ಯವನ್ನು ಒದಗಿಸಲಾಗಿದೆ.

ಸಂಸ್ಥೆಯ ಕೇಂದ್ರ ಕಛೇರಿಯು ಹುಬ್ಬಳ್ಳಿಯಲ್ಲಿದ್ದು, ಸಂಸ್ಥೆಯ ಅಡಳಿತ ವ್ಯಾಪ್ತಿಯಲ್ಲಿ ಬೆಳಗಾವಿ, ಹುಬ್ಬಳ್ಳಿ, ಧಾರವಾಡ, ಶಿರ್ಸಿ, ಬಾಗಲಕೋಟೆ, ಗದಗ, ಚಿಕ್ಕೋಡಿ, ಹಾವೇರಿಗಳಲ್ಲಿ ಒಟ್ಟು 8 ವಿಭಾಗೀಯ ಕಛೇರಿಗಳನ್ನು, 48 ಘಟಕಗಳನ್ನು ,ಹುಬ್ಬಳ್ಳಿಯಲ್ಲಿ ಒಂದು ಪ್ರಾದೇಶಿಕ ಕಾರ್ಯಾಗಾರ ಮತ್ತು ಒಂದು ಪ್ರಾದೇಶಿಕ ತರಬೇತಿ ಕೇಂದ್ರವನ್ನು ಹೊಂದಿದೆ. 

ಕಾರ್ಯಾಚರಣೆ ವಿವರ :

ಸಂಸ್ಥೆಯು ಪ್ರತಿ ದಿನ 4716 ವಾಹನಗಳಿಂದ 4440 ಅನುಸೂಚಿಗಳನ್ನು ಕಾರ್ಯಾಚರಣೆ ಮಾಡುತ್ತದೆ.
ಸಂಸ್ಥೆಯು ಪ್ರತಿ ದಿನ 15.50 ಲಕ್ಷ ಕಿ.ಮೀ. ಕ್ರಮಿಸಿ, 22.00 ಲಕ್ಷ ಪ್ರಯಾಣಿಕರನ್ನು ಕೊಂಡೊಯ್ಯುತ್ತದೆ.  
ಸಂಸ್ಥೆಯ ವ್ಯಾಪ್ತಿಯಲ್ಲಿ 6 ಕಂದಾಯ ಜಿಲ್ಲೆಗಳು, 44 ತಾಲ್ಲೂಕುಗಳು ಹಾಗೂ 4596 ಹಳ್ಳಿಗಳಿರುತ್ತವೆ.  4596 ಹಳ್ಳಿಗಳ ಪೈಕಿ 4428 ಹಳ್ಳಿಗಳಿಗೆ ಸಂಚಾರ ಸೌಲಭ್ಯ ಕಲ್ಪಿಸಲಾಗಿದೆ.  
ಸಂಸ್ಥೆಯು ಪ್ರತಿ ದಿನ 546 ನಗರ & ಉಪನಗರ, 1730 ಸಾಮಾನ್ಯ, 2028 ವೇಗದೂತ, 84 ಎಕ್ಸಿಕ್ಯೂಟೀವ್ ರಾಜಹಂಸ, 6 ಮೇಘದೂತ (ಹವಾನಿಯಂತ್ರಿತ), 24 ವೋಲ್ವೋ (ಹವಾನಿಯಂತ್ರಿತ),  ಹಾಗೂ 22 ಸ್ಲೀಪರ್ ಕೋಚ್ (ಹವಾನಿಯಂತ್ರಿತ) ಸೇವೆಗಳನ್ನು ರಾಜ್ಯದ ಮತ್ತು ಅಂತರರಾಜ್ಯದ ವಿವಿಧ ಸ್ಥಳಗಳಿಗೆ ಕಾರ್ಯಾಚರಣೆ ಮಾಡಲಾಗುತ್ತದೆ.  
ಸಂಸ್ಥೆಯ ವ್ಯಾಪ್ತಿಯಲ್ಲಿ 158 ಬಸ್ ನಿಲ್ದಾಣಗಳಿವೆ.
ಸಂಸ್ಥೆಯಲ್ಲಿ ವಿವಿಧ ದರ್ಜೆಯ ಹುದ್ದೆಗಳಾದ ಅಧಿಕಾರಿಗಳು, ಮೇಲ್ವಿಚಾರಕ ಸಿಬ್ಬಂದಿಗಳು, ಆಡಳಿತ ಸಿಬ್ಬಂದಿ, ತಾಂತ್ರಿಕ ಸಿಬ್ಬಂದಿ ಹಾಗೂ ಚಾಲನಾ ಸಿಬ್ಬಂದಿ ಹುದ್ದೆಗಳಲ್ಲಿ ಒಟ್ಟು 22262 ಸಿಬ್ಬಂದಿ ಕರ್ತವ್ಯ ನಿರ್ವಹಿಸುತ್ತಿದ್ದಾರೆ. 

 
ರಾಷ್ಟ್ರಮಟ್ಟದ ಪ್ರಶಸ್ತಿಗಳು :

 

  • 1998-99 ನೇ ಸಾಲಿಗೆ ಕಡಿಮೆ ಅಪಘಾತಗಳ ಪ್ರಮಾಣ ಸಾಧಿಸಿದ್ದಕ್ಕಾಗಿ ಕೇಂದ್ರ ಭೂ ಸಾರಿಗೆ ಸಚಿವಾಲಯದಿಂದ ಸಂಸ್ಥೆಗೆ ರೋಡ್ ಸೇಫ್ಟಿ ಪಾರಿತೋಷಕ ದೊರಕಿದೆ.
  • 2000-01 ನೇ ಸಾಲಿಗೆ ಕನಿಷ್ಠ ಕಾರ್ಯಾಚರಣೆ ವೆಚ್ಚ ಮಾಡಿದ್ದಕ್ಕಾಗಿ ಕೇಂದ್ರ ಭೂ ಸಾರಿಗೆ ಸಚಿವಾಲಯದಿಂದ ಸಂಸ್ಥೆಗೆ ಪಾರಿತೋಷಕ ದೊರಕಿದೆ.
  • 2001-02 ನೇ ಸಾಲಿಗೆ ಅಪಘಾತಗಳ ಪ್ರಮಾಣ ಕಡಿಮೆ ಮಾಡಿದ್ದಕ್ಕಾಗಿ ರೂ.50000/-ಗಳ ನಗದು ಬಹುಮಾನ ಹಾಗೂ ಪಾರಿತೋಷಕ (ಎರಡನೇ ಸ್ಥಾನ) ದೊರೆತಿರುತ್ತದೆ.
  • 2002-03 ನೇ ಸಾಲಿಗೆ ಕೆ.ಎಂ.ಪಿ.ಎಲ್. ಪ್ರಗತಿಗಾಗಿ .ಎಸ್.ಆರ್.ಟಿ.ಯು ರವರಿಂದ ರನ್ನರ ಅಪ್ ಪಾರಿತೋಷಕ ದೊರಕಿದೆ.
  • ಟೈರುಗಳ ಜೀವಮಾನದಲ್ಲಿ 2002-03 ನೇ ಸಾಲಿನಗಿಂತ 2003-04 ರಲ್ಲಿ ಗ್ರಾಮಾಂತರ ಸಾರಿಗೆಯಲ್ಲಿ ಅತೀ ಹೆಚ್ಚಿನ ಸಾಧನೆ ಮಾಡಿರುವ ಬಗ್ಗೆ ಭಾರತದಲ್ಲೇ ಎರಡನೇ ಸ್ಥಾನಕ್ಕೆ ಆಯ್ಕೆಯಾಗಿರುವುದು (Winner Tyre Performance Award for Maximum improvement (Mofussil Services)-2003-04) 
  • 2003-04 ನೇ ಸಾಲಿಗೆ ಕೆ.ಎಂ.ಪಿ.ಎಲ್. ಪ್ರಗತಿಗಾಗಿ ಪೆಟ್ರೋಲಿಯಂ ಕನ್ಸರ್ವೇಶನ್ ರೀಸರ್ಚ ಅಸೋಸಿಯೇಷನ್ (Ministry of Petroleum & Natural Gas, Govt. of India)  ದಿಂದ ರನ್ನರ್ ಅಪ್ ಪಾರಿತೋಷಕ ದೊರೆತಿದೆ
  • ಕೆ.ಎಂ.ಪಿ.ಎಲ್. ನಲ್ಲಿ 2003-04ರಲ್ಲಿ ಗ್ರಾಮಾಂತರ ಸಾರಿಗೆಯಲ್ಲಿ ಅತೀ ಹೆಚ್ಚಿನ ಸಾಧನೆ ಮಾಡಿರುವ ಬಗ್ಗೆ ಭಾರತದಲ್ಲೇ ಮೊದಲನೇ
Back To Top