ಮಾಹಿತಿ ತಂತ್ರಜ್ಞಾನದ ಕಾರ್ಯ ವ್ಯವಸ್ಥೆ

ಸಂಸ್ಥೆಯ ವ್ಯಾಪ್ತಿಯಲ್ಲಿನ ಎಲ್ಲಾ ಮಾಹಿತಿ ತಂತ್ರಜ್ಞಾನದ ಅವಶ್ಯಕತೆಗಳನ್ನು ಕೇಂದ್ರ ಕಛೇರಿಯ ಗಣಕ ಇಲಾಖೆಯಿಂದ ನಿರ್ವಹಿಸಲಾಗುತ್ತಿದೆ. ಮುಖ್ಯ ಗಣಕ ವ್ಯವಸ್ಥಾಪಕರು ಇಲಾಖಾ ಮುಖ್ಯಸ್ಥರಾಗಿ ಹಾಗೂ ಅವರ ಅಧೀನದಲ್ಲಿ ಗಣಕ ವ್ಯವಸ್ಥಾಪಕರು, ಸಹಾಯಕ ಗಣಕ ವ್ಯವಸ್ಥಾಪಕರು ಹಾಗೂ ಗಣಕ ಮೇಲ್ವಿಚಾರಕರುಗಳು ಮತ್ತು ಸಾಪ್ಟವೇರ್ ಇಂಜಿನೀಯರಗಳು ಕಾರ್ಯನಿರ್ವಹಿಸುತ್ತಿದ್ದಾರೆ. ಅವರುಗಳು ಗಣಕೀಕೃತ ಸಾಪ್ಟವೇರ್‍ಗಳ ನಿರ್ವಹಣೆ ಮತ್ತು ಸಾಪ್ಟವೇರ್ ಅಳವಡಿಕೆ ಕಾರ್ಯವನ್ನು ನಿರ್ವಹಿಸುತ್ತಾರೆ. ಮುಂದುವರಿದು, ವಿಭಾಗ ಮತ್ತು ಘಟಕಗಳಲ್ಲಿನ ತಂತ್ರಾಂಶ ವ್ಯವಸ್ಥೆಯ ಮೇಲ್ವಿಚಾರಣೆ ಮತ್ತು ನಿರ್ವಹಣೆಗಾಗಿ ವಿಭಾಗದ ಸಹಾಯಕ / ಅಂಕಿ ಸಂಖ್ಯಾಧಿಕಾರಿಗಳನ್ನು ಮಾಹಿತಿ ತಂತ್ರಜ್ಞಾನದ ನೋಡಲ್ ಅಧಿಕಾರಿಯನ್ನಾಗಿ ನಿಯೋಜಿಸಲಾಗಿದ್ದು, ಇವರ ಅಧೀನದಲ್ಲಿ ಸಾಪ್ಟವೇರ್ ಇಂಜಿನೀಯರಗಳು ಕಾರ್ಯನಿರ್ವಹಿಸುತ್ತಿದ್ದಾರೆ. 

ಸಂಸ್ಥೆಯ ಕೇಂದ್ರ ಕಛೇರಿ, ವಿಭಾಗ, ಘಟಕ  ಮತ್ತು ಪ್ರಾದೇಶಿಕ ಕಾರ್ಯಾಗಾರ ಮಟ್ಟದಲ್ಲಿ ವಿವಿಧ ಉದ್ದೇಶಗಳಿಗಾಗಿ ಈ ಕೆಳಕಂಡ ಸಾಪ್ಟವೇರ್‍ಗಳನ್ನು ಅಭಿವೃದ್ಧಿಪಡಿಸಿ ಉಪಯೋಗಿಸಲಾಗುತ್ತಿದೆ.
1.    DCS ಸಾಫ್ಟವೇರ 
2.    ಪೇರೋಲ್ ಸಾಫ್ಟವೇರ
3.    ಭವಿಷ್ಯ ನಿಧಿ ಧಪ್ತರು ಮತ್ತು ಚೀಟಿಗಳ ಸಾಫ್ಟವೇರ
4.    ವೆಹಿಕಲ್ ಡಿಪ್ರಿಸಿಯೇಶನ್ ಸಾಫ್ಟವೇರ
5.    ತಂತ್ರಾಂಶ ಆಧಾರಿತ ರಜೆ ಅರ್ಜಿ ನಿರ್ವಹಣಾ ವ್ಯವಸ್ಥೆ 
6.    ಸೇವಾ ಸ್ಪಂದನ ಸಾಫ್ಟವೇರ 
7.    ಚಾಲನಾ ಸಿಬ್ಬಂದಿಗಳ ಕರ್ತವ್ಯ ನಿಯೋಜನೆ ಸಾಫ್ಟವೇರ (ಡ್ಯೂಟಿ ರೋಟಾ)
8.    ಆಧಾರ ಕಾರ್ಡ ಆಧಾರಿತ ಬಯೋಮೆಟ್ರಿಕ್ ಹಾಜರಾತಿ ವ್ಯವಸ್ಥೆ
9.    ಲೆಸ್ ಪೇಪರ ಆಫೀಸ್

Back To Top