ನೇಮಕಾತಿ

ವಾಕರಸಾಸಂಸ್ಥೆಯಲ್ಲಿ ಸಿಬ್ಬಂದಿಗಳ ನೇಮಕಾತಿ ಬಗ್ಗೆ ಸಂಕ್ಷಿಪ್ತ ಮಾಹಿತಿ​:

ಸಂಸ್ಥೆಯು ಸಾರ್ವಜನಿಕ ಪ್ರಯಾಣಿಕರಿಗೆ ಉತ್ತಮ, ಸುರಕ್ಷಿತ ಹಾಗೂ ವಿಶ್ವಾಸಾರ್ಹ ಸಾರಿಗೆ ಸೌಲಭ್ಯವನ್ನು ನೀಡಲು ಹೊಂದಿರುವ ಉದ್ದೇಶವನ್ನು ವಾಸ್ತವಿಕವಾಗಿ ಆಚರಣೆಗೆ ತರಲು ಎಲ್ಲಾ ರೀತಿಯಲ್ಲೂ ಪ್ರಯತ್ನಿಸುತ್ತಿದೆ. ಈ ರೀತಿಯಲ್ಲಿ ಸಂಸ್ಥೆಗೆ ಅತ್ಯುತ್ತಮ ಸಿಬ್ಬಂದಿಗಳನ್ನು ಸೇರ್ಪಡೆಗೊಳಿಸುವ ನಿಟ್ಟಿನಲ್ಲಿ ವಾಕರಸಾಸಂಸ್ಥೆಯು ಕರಾರಸಾಸಂಸ್ಥೆಯ ಪದವೃಂದ ಮತ್ತು ನೇಮಕಾತಿ ನಿಯಮಾವಳಿ-1982 ನ್ನು ಯಥಾವತ್ತಾಗಿ ಅಳವಡಿಸಿಕೊಂಡಿರುತ್ತದೆ.

ದರ್ಜೆ-2 ಅಧಿಕಾರಿಗಳು ಮತ್ತು ಮೇಲ್ವಿಚಾರಕ ಸಿಬ್ಬಂದಿಗಳ ಪದವೃಂದ & ನಿರ್ವಹಣಾ ಪ್ರಾಧಿಕಾರವು ಕರಾರಸಾಸಂಸ್ಥೆಯೇ ಆಗಿರುವುದರಿಂದ ಈ ಹುದ್ದೆಗಳಿಗೆ ನೇಮಕಾತಿಯನ್ನು ಸಾಮಾನ್ಯ ಪ್ರವೇಶ ಪರೀಕ್ಷೆಯ ಮುಖಾಂತರ ಕರಾರಸಾಸಂಸ್ಥೆಯಿಂದಲೇ ನಿರ್ವಹಿಸಲಾಗುತ್ತದೆ. ಈ ಹುದ್ದೆಗಳಿಗೆ ಆಯ್ಕೆಯನ್ನು ಅಭ್ಯರ್ಥಿಯು ಸಾಮಾನ್ಯ ಪ್ರವೇಶ ಪರೀಕ್ಷೆಯಲ್ಲಿ ಗಳಿಸಿದ ಅಂಕಗಳು ಮತ್ತು ಆಯಾ ಹುದ್ದೆಗೆ ನಿಗದಿಪಡಿಸಿದ ವಿದ್ಯಾರ್ಹತೆಯಲ್ಲಿ ಗಳಿಸಿದ ಅಂಕಗಳ ಆಧಾರದ ಮೇಲೆ ಮಾಡಲಾಗುತ್ತದೆ.

ಮೇಲ್ವಿಚಾರಕೇತರ ದರ್ಜೆ-3 ಹುದ್ದೆಗಳಾದ ನಿರ್ವಾಹಕ, ಕಿರಿಯ ಸಹಾಯಕ, ಭದ್ರತಾ ರಕ್ಷಕ, ಇನ್ನಿತರೆ ಹಾಗೂ ದರ್ಜೆ-4 ಹುದ್ದೆಗಳಿಗೆ ನೇಮಕಾತಿಯನ್ನು ವಾಕರಸಾಸಂಸ್ಥೆಯಲ್ಲಿಯೇ ಮಾಡಲಾಗುತ್ತದೆ. ಈ ಹುದ್ದೆಗಳ ಆಯ್ಕೆಗೆ ಪ್ರಮುಖವಾಗಿ ಆಯಾ ಹುದ್ದೆಗಳಿಗೆ ನಿಗದಿಪಡಿಸಿದ ವಿದ್ಯಾರ್ಹತೆಯಲ್ಲಿ ಪಡೆದ ಅಂಕಗಳ ಅರ್ಹತೆಯನ್ನೆ ಮಾನದಂಡವನ್ನಾಗಿಸಿದೆ.

ಮುಂದುವರೆದಂತೆ, ಈಗಾಗಲೇ ತಿಳಿಸಿದಂತೆ ಸಂಸ್ಥೆಯ ಮುಖ್ಯ ಉದ್ದೇಶವು ಪ್ರಯಾಣಿಕರ ರಕ್ಷಣೆಯೇ ಆಗಿರುವುದರಿಂದ ಚಾಲಕ ಹುದ್ದೆಯು ಸಂಸ್ಥೆಯಲ್ಲಿ ಬಹುಮುಖ್ಯ ಪಾತ್ರವನ್ನು ಹೊಂದಿರುತ್ತದೆ. ಆದುದರಿಂದ, ಅತ್ಯುತ್ತಮ ಚಾಲನಾ ಕೌಶಲ್ಯವನ್ನು ಹೊಂದಿದ ಪರಿಣಿತ ಅಭ್ಯರ್ಥಿಗಳ ಅವಶ್ಯಕತೆ ಇರುತ್ತದೆ. ಆದ್ದರಿಂದ, ಚಾಲಕ ಮತ್ತು ಚಾಲಕ-ಕಂ-ನಿರ್ವಾಹಕ ಹುದ್ದೆಗಳಿಗೆ ಆಯ್ಕೆಯು ನಿಗದಿತ ದೈಹಿಕ ಅರ್ಹತೆಯೊಂದಿಗೆ ಅಭ್ಯರ್ಥಿಗಳ ಚಾಲನಾ ಪರೀಕ್ಷೆಯ ಕಾರ್ಯಕ್ಷಮತೆಯನ್ನು ಪರಿಗಣಿಸಲಾಗುತ್ತದೆ. ನಿಗದಿತ ಗರಿಷ್ಠ 25 ಅಂಕಗಳ ಎರಡು ಪ್ರತ್ಯೇಕ ಚಾಲನಾ ಪರೀಕ್ಷೆಯನ್ನು ನಡೆಸಲಾಗುತ್ತದೆ. ಪ್ರತಿ ಅಭ್ಯರ್ಥಿಯು ಒಟ್ಟು 50 ಅಂಕಗಳಿಗೆ ಕನಿಷ್ಠ 25ಕ್ಕಿಂತ ಹೆಚ್ಚಿನ ಅಂಕಗಳನ್ನು ಪಡೆದಲ್ಲಿ ಮಾತ್ರ ಆಯ್ಕೆಗೆ ಅರ್ಹರಾಗುತ್ತಾರೆ. ಸಂಸ್ಥೆಯು ಗಣಕೀಕೃತ ಚಾಲನಾ ವೃತ್ತಿ ಪರೀಕ್ಷಾ ಪದ್ಧತಿಯನ್ನು ಅಳವಡಿಸಿಕೊಂಡಿದ್ದು, ಯಾವುದೇ ರೀತಿಯ ಮಾನವ ಹಸ್ತಕ್ಷೇಪ ಮತ್ತು ದೋಷಗಳಿಲ್ಲದೇ ದೂರುಗಳಿಗೆ ಆಸ್ಪದ ನೀಡದೇ ಸಂಪೂರ್ಣ ಪಾರದರ್ಶಕವಾಗಿ ನಡೆಸುತ್ತಿದ್ದು, ಇದರಿಂದ ಅಭ್ಯರ್ಥಿಯ ಚಾಲನಾ ಸಾಮಥ್ರ್ಯವನ್ನು ಸಮರ್ಪಕವಾಗಿ ಮೌಲ್ಯಮಾಪನ ಮಾಡಲು ಅವಕಾಶವಿರುತ್ತದೆ. ಚಾಲಕ ಮತ್ತು ಚಾಲಕ-ಕಂ-ನಿರ್ವಾಹಕರುಗಳ ಆಯ್ಕೆ ಪ್ರಕ್ರಿಯೆಗೆ ಈ ವಿಶಿಷ್ಟ ಪದ್ಧತಿಯನ್ನು ಈ ದೇಶದಲ್ಲಿಯೇ ಈ ಸಂಸ್ಥೆಯೇ ಮೊಟ್ಟಮೊದಲು ಅಳವಡಿಸಿಕೊಂಡ ಹೆಮ್ಮೆ ಈ ಸಂಸ್ಥೆಯದಾಗಿರುತ್ತದೆ.

ಮುಂದುವರೆದಂತೆ, ಅಭ್ಯರ್ಥಿಗಳು ನಿರ್ವಹಿಸಬಹುದಾದ ಹುದ್ದೆಯ ಅಗತ್ಯಕ್ಕೆ ಅನುಗುಣವಾಗಿ ಗುಮಾಸ್ತ ಹುದ್ದೆಗಳನ್ನು ಹೊರತುಪಡಿಸಿ ಇನ್ನುಳಿದ ಹುದ್ದೆಗಳಿಗೆ ದೈಹಿಕ ಅರ್ಹತೆಯನ್ನು ನಿಗದಿಪಡಿಸಲಾಗಿದೆ. ಚಾಲಕ, ಚಾಲಕ-ಕಂ-ನಿರ್ವಾಹಕ, ಭದ್ರತಾ ರಕ್ಷಕ, ಕುಶಲಕರ್ಮಿ, ತಾಂತ್ರಿಕ ಸಹಾಯಕ, ಸಹಾಯಕ ಸಂಚಾರ ನಿರೀಕ್ಷಕ ಹುದ್ದೆಗಳಿಗೆ ಪುರುಷ ಅಭ್ಯರ್ಥಿಗಳಿಗೆ ಕನಿಷ್ಠ 163 ಸೆಂ.ಮೀ ಎತ್ತರ, ಕನಿಷ್ಠ 55 ಕೆ.ಜಿ ತೂಕ ಹಾಗೂ ಮಹಿಳಾ ಅಭ್ಯರ್ಥಿಗಳಿಗೆ ಕನಿಷ್ಠ 153 ಸೆಂ.ಮೀ ಎತ್ತರ, ಕನಿಷ್ಠ 50 ಕೆ.ಜಿ ತೂಕ ನಿಗದಿಪಡಿಸಲಾಗಿದೆ. ಆದರೆ ನಿರ್ವಾಹಕ ಹುದ್ದೆಗೆ ಕೇವಲ ಎತ್ತರವನ್ನು ಮಾತ್ರ ಪರಿಗಣಿಸಲಾಗುತ್ತಿದ್ದು, ಪುರುಷರಿಗೆ-160 ಸೆಂ.ಮೀ ಮತ್ತು ಮಹಿಳೆಯರಿಗೆ-150 ಸೆಂ.ಮೀ ಎತ್ತರ ನಿಗದಿಪಡಿಸಲಾಗಿದೆ. ಭದ್ರತಾ ರಕ್ಷಕ ಹುದ್ದೆಗಳಿಗೆ ದೈಹಿಕ ಅರ್ಹತೆಯನ್ನು ಹೊಂದಿರುವುದರೊಂದಿಗೆ ನಿಯಮಾವಳಿಗಳಲ್ಲಿ ನಿರ್ಧಿಷ್ಟಪಡಿಸಿದನುಸಾರ ದೈಹಿಕ ಸಹಿಷ್ಣುತಾ ಪರೀಕ್ಷೆಯಲ್ಲಿ ತೇರ್ಗಡೆಯಾಗಬೇಕಾಗಿರುತ್ತದೆ. ಮೇಲೆ ತಿಳಿಸಿದಂತೆ ಅರ್ಹತೆಯೊಂದಿಗೆ ಸರ್ಕಾರವು ಕಾಲಕಾಲಕ್ಕೆ ಹೊರಡಿಸುವ ಆದೇಶದನುಸಾರ ಮೀಸಲಾತಿ ಸೌಲಭ್ಯವನ್ನು ಸಹ ಆಯಾ ಪ್ರವರ್ಗದ ಅಭ್ಯರ್ಥಿಗಳಿಗೆ ವಿಸ್ತರಿಸಲಾಗುವುದು.​

ತಾಂತ್ರಿಕ ವರ್ಗದ ಹುದ್ದೆಗಳಾದ ಕುಶಲಕರ್ಮಿ ಮತ್ತು ತಾಂತ್ರಿಕ ಸಹಾಯಕ ಹಾಗೂ ಸಹಾಯಕ ಸಂಚಾರ ನಿರೀಕ್ಷಕ ಹುದ್ದೆಗಳಿಗೆ ಆಯ್ಕೆಯು ಆಯಾ ಹುದ್ದೆಗಳಿಗೆ ನಿಗದಿಪಡಿಸಿದ ವಿದ್ಯಾರ್ಹತೆಯಲ್ಲಿ ಪಡೆದ ಅಂಕಗಳು ಮತ್ತು ಸಂದರ್ಶನದಲ್ಲಿ ಪಡೆದ ಅಂಕಗಳನ್ನು ಒಟ್ಟುಗೂಡಿಸಿ ಮೀಸಲಾತಿಯನ್ವಯ ಆಯ್ಕೆ ಮಾಡಲಾಗುತ್ತದೆ. ಸಂದರ್ಶನವನ್ನು ಸಮರ್ಪಕವಾಗಿ ಮತ್ತು ಪಾರದರ್ಶಕವಾಗಿ ನಡೆಸಲು ಸ್ಪಷ್ಟ ಮಾರ್ಗದರ್ಶಿ ನಿಯಮಗಳನ್ನು ನಿರ್ಧಿಷ್ಟಪಡಿಸಲಾಗಿದೆ. ಅಭ್ಯರ್ಥಿಗಳ ಸಾಮಥ್ರ್ಯತೆಯನ್ನು ಅಳೆಯಲು ಈ ಕೆಳಗಿನ ಮಾನದಂಡಗಳನ್ನು ನಿರ್ಧಿಷ್ಟಪಡಿಸಲಾಗಿದೆ.:​

  •  ವ್ಯಕ್ತಿತ್ವ ಮತ್ತು ವ್ಯಕ್ತಪಡಿಸುವ ಸಾಮಥ್ರ್ಯ 5 ಅಂಕಗಳು
  •  ಹುದ್ದೆಗೆ ಸಂಬಂಧಿಸಿದ ಜ್ಞಾನ 5 ಅಂಕಗಳು
  •  ಸಾಮಾನ್ಯ ಜ್ಞಾನ 5 ಅಂಕಗಳು

ಪ್ರತಿದಿನ ಸಂದರ್ಶನ ಮುಗಿದ ತಕ್ಷಣ ಆಯ್ಕೆ ಸಮಿತಿಯು ಅಭ್ಯರ್ಥಿಯು ಸಂದರ್ಶನದಲ್ಲಿ ಪಡೆದ ಅಂಕವನ್ನು ಸೂಚನಾ ಫಲಕದಲ್ಲಿ ಪ್ರಕಟಿಸಲು ಕ್ರಮ ತೆಗೆದುಕೊಳ್ಳುತ್ತದೆ.​

ಪ್ರಸ್ತುತ ನೇಮಕಾತಿಗೆ ಅಭ್ಯರ್ಥಿಗಳು ಅರ್ಜಿಗಳನ್ನು “ONLINE” ಮುಖಾಂತರವೇ ಸಲ್ಲಿಸಬೇಕಾಗಿದ್ದು, ಅಭ್ಯರ್ಥಿಗಳ ಮಾಹಿತಿಗಾಗಿ ಸಂಕ್ಷಿಪ್ತ ಜಾಹೀರಾತನ್ನು ರಾಜ್ಯವ್ಯಾಪಿ ಪ್ರಸಾರದ ದಿನಪತ್ರಿಕೆಗಳಲ್ಲಿ ನೀಡಲಾಗುತ್ತದೆ. ನೇಮಕಾತಿ ಮಾಡಬೇಕಾದ ಪ್ರತಿಯೊಂದು ಹುದ್ದೆಗೆ ಅಗತ್ಯವಾದ ವಿದ್ಯಾರ್ಹತೆ, ಹುದ್ದೆಗಳ ಸಂಖ್ಯೆ, ಆಯ್ಕೆ ವಿಧಾನ ಇವುಗಳ ಸಂಪೂರ್ಣ ವಿವರಗಳನ್ನು ಜಾಹೀರಾತಿನಲ್ಲಿ ನೀಡಲಾಗುತ್ತದೆ.​

ಕಳೆದ 5 ವರ್ಷಗಳಲ್ಲಿ ಸಂಸ್ಥೆಯಲ್ಲಿ ವಿವಿಧ ಹುದ್ದೆಗಳಿಗೆ ಈ ಕೆಳಕಂಡ ಹುದ್ದೆಗಳಿಗೆ ನೇರ ನೇಮಕಾತಿ ಮಾಡಲಾಗಿರುತ್ತದೆ.​

ಚಾಲಕ-ಕಂ-ನಿರ್ವಾಹಕ​ 5857
ಕುಶಲಕರ್ಮಿ​ 109
ತಾಂತ್ರಿಕ ಸಹಾಯಕ​ 502
ನಿರ್ವಾಹಕ​ 904
ಚಾಲಕ​ 10

Back To Top